ಜೂಲಿ ಆಂಡ್ರ್ಯೂಸ್ ಹಾಲಿವುಡ್ ನ ಹಾಡುವ ನಟಿಯರಲ್ಲಿ ಪ್ರಮುಖರು. ಈಕೆ ನಟಿಸಿದ, ಸೌಂಡ್ ಆಫ್ ಮ್ಯೂಸಿಕ್ ಚಿತ್ರ ಒಂದು ದಾಖಲೆಯನ್ನೇ ನಿರ್ಮಿಸಿತು. ಅತ್ಯಂತ ಸುಶ್ಯಾವ್ಯವಾಗಿ ಹಾಡುವ ಈ ಚಿತ್ರಕಲಾವಿದೆ, ಮಕ್ಕಳು, ಸ್ತ್ರೀಯರು, ಹಾಗೂ ಪುರುಷಪ್ರಪಂಚದಲ್ಲಿ ತಮ್ಮ ಛಾಪನ್ನು ಒತ್ತಿದ್ದರು. ಮತ್ತೊಂದು ಚಿತ್ರ, 'ಕ್ಯಾನ್ ಕ್ಯಾನ್' ಎಂಬ ಪ್ರೆಂಚ್ ನೃತ್ಯಾಧಾರಿತ ಚಲನಚಿತ್ರ, ಎಲ್ಲರ ಮನಸ್ಸನ್ನು ರಂಜಿಸಿತ್ತು.